ಬೇಕಾಗುವ ಸಾಮಗ್ರಿಗಳು:
1 ಕಪ್ ಸ್ಟ್ರಾಬೆರಿ
1/2 ಕಪ್ ಕ್ರೀಮ್
1/2 ಕಪ್ ಮಿಲ್ಕ್ ಮೇಡ್
8 ಮಾರಿ ಬಿಸ್ಕಿಟ್
3 ಟೇಬಲ್ ಚಮಚ ಕೆಂಪು ಟುಟಿ ಫ್ರೂಟಿ
1 ಕಪ್ ಹಾಲು
1 ಟೇಬಲ್ ಚಮಚ ಕಾರ್ನ್ ಫ್ಲೋರ್
1 ಟೇಬಲ್ ಚಮಚ ಸ್ಟ್ರಾಬೆರಿ ಕ್ರಷ್
ಮಾಡುವ ವಿಧಾನ:
ಕೆಲವು ಸ್ಟ್ರಾಬೆರಿ ಕೃಷ್ ಮಾಡಿ ಗ್ಯಾಸ್ ಮೇಲೆ ಒಂದು ಬಾಣಲೆ ಇಡಿ ಅದಕ್ಕೆ 1/2 ಕಪ್ ಸ್ಟ್ರಾಬೆರಿ ಮಿಕ್ಸಿ ಮಾಡಿ ಹಾಕಿ,ನಂತ್ರ 1/2 ಕಪ್ ಸಕ್ಕರೆ ಹಾಕಿ 8 ನಿಮಿಷ ಕುದಿಸಿ ಗ್ಯಾಸ್ ಆಫ್ ಮಾಡಿ ಆರಲು ಬಿಡಿ,
ಗ್ಯಾಸ್ ಹಚ್ಚಿ ಇನ್ನೊಂದು ಬಾಣಲೆ ಇಡಿ ಅದಕ್ಕೆ 1 ಕಪ್ ಹಾಲು ಹಾಕಿ, ಕುದಿ ಬಂದ ಮೇಲೆ ಅದಕ್ಕೆ 1/4 ಕಪ್ ನೀರನ್ನು ಹಾಕಿ ಕಾರ್ನ್ ಫ್ಲೋರ್ ಹಾಕಿ ಕಲಿಸಿದ ಮಿಶ್ರಣ ಹಾಕಿ, 1/4 ಕಪ್ ಸಕ್ಕರೆ, 3 ಟೇಬಲ್ ಚಮಚ ಮಿಲ್ಕ್ ಮೇಡ್ ಹಾಕಿ ಕಲಿಸಿ 5 ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿ, ಅದಕ್ಕೆ 3 ಟೇಬಲ್ ಚಮಚ ಸ್ಟ್ರಾಬೆರ್ರಿ ಕ್ರಷ್ ಹಾಕಿ ಕಲಿಸಿ ಆರಲು ಬಿಡಿ.
ಸ್ಟ್ರಾಬೆರಿ ನ ಸ್ಲೈಸ್ ಮಾಡಿ ಇಡಿ.
ಮಾರಿ ಬಿಸ್ಕಿಟ್ ನ ಲಟ್ಟಣಿಗೆ ನಿಂದಾ ಚೂರು ತರಿ ಮಾಡಿ ಇಡಿ
ಒಂದು ಬೌಲ್ ಗೆ ಫ್ರೆಶ್ ಕ್ರೀಮ್, 3 ಟೇಬಲ್ ಚಮಚ ಸಕ್ಕರೆ ಪುಡಿ, 1/4 ಕಪ್ ಮಿಲ್ಕ್ ಮೇಡ್ ಹಾಕಿ ಚೆನ್ನಾಗಿ ಬೀಟ್ ಮಾಡಿ ಇಡಿ
ಒಂದು ಸರ್ವಿಂಗ್ ಗ್ಲಾಸ್ ಗೆ ಮೊದಲು ಮಾರಿ ಬಿಸ್ಕಿಟ್ ಪುಡಿ ಹಾಕಿ, ನಂತ್ರ ಆದರ ಮೇಲೆ ,ಕಾರ್ನ್ ಫ್ಲೋರ್ ಮಿಶ್ರಣ ಹಾಕಿ,ಅದರ ಮೇಲೆ ಸ್ಟ್ರಾಬೆರ್ರಿ ಸ್ಲೈಸ್ ಹಾಕಿ,ಅದರ ಮೇಲೇ ಕ್ರೀಮ್ ಹಾಕಿ, ಆದರ ಮೇಲೆ ಟೂಟಿ ಫ್ರೂಟ್ ಹಾಕಿ ,ಅದರ ಮೇಲೆ ಬಿಸ್ಕಿಟ್ ನ ಪುಡಿ, ಅದರ ಮೇಲೆ ಕ್ರೀಮ್ , ಹಾಕಿ,ಸುತ್ತಲೂ ಸ್ಟ್ರಾಬೆರ್ರಿ ಸ್ಲೈಸ್ ಇಟ್ಟು, ಮತ್ತೆ ಕಾರ್ನ್ ಫ್ಲೋರ್ ನ ಮಿಶ್ರಣ ಹಾಕಿ, ಸ್ಟ್ರಾಬೆರ್ರಿ ಕ್ರಶ್ ಹಾಕಿ
ನಿಮಗೆ ಎಸ್ಟು ಬೇಕೋ ಅಷ್ಟು ಲೇಯರ್ ಮಾಡ್ಕೊಳಿ ,ಮಾಡಿ 3 ರಿಂದ 4 ಗಂಟೆ ಫ್ರಿಡ್ಜ್ ನಲ್ಲಿಟ್ಟು ಸವಿಯಿರಿ.

0 ಕಾಮೆಂಟ್ಗಳು