ಕುಕ್ಕರಿಗೆ ನಾರು ತೆಗೆದು ಸಣ್ಣಗೆ ಕಟ್ ಮಾಡಿ ತೊಳೆದ ಬೀನ್ಸ್ 1 ಕಪ್, ನಾರು ತೆಗೆದು ಸುಲಿದು ಸಣ್ಣಗೆ ಕಟ್ ಮಾಡಿ ತೊಳೆದ ಚಪ್ಪರದ ಅವರೇ 1ಕಪ್,  1/2 ಕಪ್  ತೊಳೆದ ತೊಗರಿ ಬೇಳೆ ರುಚಿಗೆ ತಕ್ಕಷ್ಟು ಉಪ್ಪು 1-2 ಗ್ಲಾಸ್ ನೀರು ಹಾಕಿ ಮುಚ್ಚಳ ಮುಚ್ಚಿ 1 ಸೀಟಿ ಕೂಗಿಸಿ ತಣ್ಣಗಾದ ಮೇಲೆ ನೀರನ್ನು ಬಗ್ಗಿಸಿಡಿ. 

ಮಿಕ್ಸಿ ಜಾರಿಗೆ 1/4 ಹುರಿದು ಸಿಪ್ಪೆ ತೆಗೆದ ಕಡಲೆಬೀಜ 2-3 ಬ್ಯಾಡಗಿ ಮೆಣಸಿನಕಾಯಿ ಹಾಕಿ ತರಿ ತರಿಯಾಗಿ ಪುಡಿ ಮಾಡಿಡಿ. 

ಬಾಣಲೆಗೆ ಎಣ್ಣೆ ಹಾಕಿ ಕಾದ ನಂತ್ರ ಸಾಸಿವೆ ಹಾಕಿ ಸಿಡಿಸಿ ಸಣ್ಣಗೆ ಕಟ್ ಮಾಡಿದ 1 ಈರುಳ್ಳಿ ಸ್ವಲ್ಪ ಜಜ್ಜಿದ ಬೆಳ್ಳುಳ್ಳಿ 2-3 ಒಣಮೆಣಸಿನಕಾಯಿ ಹಾಕಿ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ ಬೇಯಿಸಿಟ್ಟ ಬೀನ್ಸ್ ಮತ್ತು ಚಪ್ಪರ ದವರೇ ಬೇಳೆ ಮಿಶ್ರಣ ಹಾಕಿ ಮಿಕ್ಸ್ ಮಾಡಿ ಪುಡಿ ಮಾಡಿಟ್ಟ ಕಡಲೆಬೀಜದ ಮಿಶ್ರಣ ಹಾಕಿ ಕಲಿಸಿದರೆ ರುಚಿಯಾದ ಚಪ್ಪರದವರೇ ಮತ್ತು ಬೀನ್ಸ್ ಪಲ್ಯ ಸವಿಯಲು ಸಿದ್ದ.



ಚಪ್ಪರ ಅವರೇ ಮತ್ತು ಬೀನ್ಸ್ ಪಲ್ಯ