1ಕಪ್ ಕಡಲೆಬೇಳೆಯನ್ನು ತೊಳೆದು 1ಗಂಟೆ ಕಾಲ ನೆನೆಸಿಡಿ. ಮಿಕ್ಸಿ ಜಾರಿಗೆ ನೆಂದ ಕಡಲೆಬೇಳೆ 1ಪೀಸ್ ಚಕ್ಕೆ, 3-4 ಲವಂಗ,5-8 ಹಸಿಮೆಣಸಿನಕಾಯಿ, 5-6 ಬೆಳ್ಳುಳ್ಳಿ ಎಸಳು, 1/2ಇಂಚು ಶುಂಠಿ ಹಾಕಿ ತರಿ ತರಿಯಾಗಿ ರುಬ್ಬಿಡಿ.
ಒಂದು ಬಟ್ಟಲಿಗೆ ಸಣ್ಣಗೆ ಕಟ್ ಮಾಡಿದ 1 ಈರುಳ್ಳಿ, ಸ್ವಲ್ಪ ಸಬ್ಬಕ್ಕಿ ಸೊಪ್ಪು, ಸ್ವಲ್ಪ ಕೊತಂಬರಿ, ಸ್ವಲ್ಪ ಪುದಿನಾ, ಸ್ವಲ್ಪ ಕರಿಬೇವು ರುಬ್ಬಿದ ಬೇಳೆ ಮಿಶ್ರಣ ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಕಲಿಸಿ ಕಾದ ಎಣ್ಣೆಯಲ್ಲಿ ವಡೆ ತರ ತಟ್ಟಿ ಹಾಕಿ ಮಂದ ಉರಿಯಲ್ಲಿ ಎರಡೂ ಕಡೆ ಹೊಂಬಣ್ಣ ಬರುವಂತೆ ಕರಿದು ತೆಗೆದರೆ ರುಚಿಯಾದ ಮಸಾಲಾ ವಡೆ ಸವಿಯಲು ಸಿದ್ದ.
1 ಕಾಮೆಂಟ್ಗಳು
Nice. Will try 👍
ಪ್ರತ್ಯುತ್ತರಅಳಿಸಿ