ಉದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
ಬಾಣಲೆಗೆ 2ಚಮಚ ತುಪ್ಪ, 2ಚಮಚ ಎಣ್ಣೆ ಹಾಕಿ ಕಾದ ನಂತ್ರ ಜೀರಿಗೆ, ಪಲಾವ್ ಎಲೆ, ಚಕ್ಕೆ 1ಪೀಸ್, ಲವಂಗ 2, ಏಲಕ್ಕಿ 1ಹಾಕಿ ಬಾಡಿಸಿ ಸಣ್ಣಗೆ ಕಟ್ ಮಾಡಿದ 1ಈರುಳ್ಳಿ ಗೋಡಂಬಿ ಸ್ವಲ್ಪ, ಸ್ವಲ್ಪ ಕರಿಬೇವು ಕಟ್ ಮಾಡಿದ 2ಹಸಿಮೆಣಸಿನಕಾಯಿ ಸ್ವಲ್ಪ ಹಸಿಬಟಾಣಿ ಹಾಕಿ ಫ್ರೈ ಮಾಡಿ.
1ಚಮಚ ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವಂತೆ ಫ್ರೈ ಮಾಡಿ 1/4ಚಮಚ ಅರಶಿನ, 1/2ಚಮಚ ಕಾರದ ಪುಡಿ, 1/2ಚಮಚ ಗರಂ ಮಸಾಲಾ ಹಾಕಿ ಚೆನ್ನಾಗಿ ಫ್ರೈ ಮಾಡಿ.
ತುರಿದ 2ದೊಡ್ಡ ಕ್ಯಾರಟ್ ಹಾಕಿ ಫ್ರೈ ಮಾಡಿ ರುಚಿಗೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ 4-5 ನಿಮಿಷ ಬೇಯಿಸಿ ನಂತ್ರ ಅದಕ್ಕೆ ಮಾಡಿಟ್ಟ ಅನ್ನ ಸಣ್ಣಗೆ ಕಟ್ ಮಾಡಿದ ಕೊತಂಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಕ್ಯಾರಟ್ ರೈಸ್ ಸವಿಯಲು ಸಿದ್ದ.
0 ಕಾಮೆಂಟ್ಗಳು