ಮೊದಲಿಗೆ 1/4 kg ಬೆಂಡೆಕಾಯಿ ತೊಳೆದು ಬಟ್ಟೆಯಿಂದ ಒರಸಿ ಕಟ್ ಮಾಡಿ ಮಧ್ಯ ಸೀಳಿ ಪಕ್ಕಕ್ಕೆಯಿಡಿ. ಬಾಣಲೆ ಬಿಸಿಗಿಟ್ಟು  4-5 ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಸಿಡಿಸಿ ಸಣ್ಣಗೆ ಕಟ್ ಮಾಡಿದ 1ಈರುಳ್ಳಿ ಹಾಕಿ ಫ್ರೈ ಮಾಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ ಹಾಕಿ ಹಸಿವಾಸನೆ ಹೋಗುವಂತೆ ಫ್ರೈ ಮಾಡಿ.

 ಕಟ್ ಮಾಡಿಟ್ಟ  ಬೆಂಡೆಕಾಯಿ ಸೇರಿಸಿ ಮಂದ ಉರಿಯಲ್ಲಿ 5-8 ನಿಮಿಷ ಚೆನ್ನಾಗಿ ಫ್ರೈ ಮಾಡಿ ಉರಿ ಸಣ್ಣ ಮಾಡಿ ರುಚಿಗೆ ಉಪ್ಪು, 1/4 ಚಮಚ ಅರಶಿನ, 1ಚಮಚ ಧನಿಯಾ ಪುಡಿ, 1.1/2 ಚಮಚ ಕಾರದ ಪುಡಿ, 1/2ಚಮಚ ಡ್ರೈ ಮ್ಯಾಂಗೋ ಪುಡಿ, 1/2 ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 4-5 ಬೇಯಿಸಿ ಅದಕ್ಕೆ 1/2ಚಮಚ ಗರಂ ಮಸಾಲಾ 2-3ಚಮಚ ಕಡಲೆಹಿಟ್ಟು ಹಾಕಿ ಸಣ್ಣ ಉರಿಯಲ್ಲಿ 5-8 ಚೆನ್ನಾಗಿ ಫ್ರೈ ಮಾಡಿ ಸಣ್ಣಗೆ ಕಟ್ ಮಾಡಿದ ಕೊತಂಬರಿ ಹಾಕಿ ಕಲಿಸಿದರೆ ರುಚಿಯಾದ ಬೆಂಡೆಕಾಯಿ ಫ್ರೈ ಸವಿಯಲು ಸಿದ್ದ.


ಬೆಂಡೆಕಾಯಿ ಫ್ರೈ ಪಾಕವಿಧಾನ